ಬೆಂಗಳೂರು: ಶಕ್ತಿ ಯೋಜನೆ ಆರಂಭವಾದ ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚಿದ ದಟ್ಟಣೆಯಿಂದ ಪರದಾಡುತ್ತಿದ್ದ ಬೆಂಗಳೂರಿನ ಪ್ರಯಾಣಿಕರಿಗೆ ಇದೀಗ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರದ PM-E-DRIVE ಯೋಜನೆಯಡಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ. ಈ ಹೊಸ ಬಸ್‌ಗಳ ಸೇರ್ಪಡೆಯಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆ ಇದೆ.
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಭಾರೀ ದಟ್ಟಣೆ ಕಂಡುಬಂದಿತ್ತು. ಇದರಿಂದ ಪುರುಷ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ದಿನನಿತ್ಯ ಕೆಲಸಕ್ಕೆ ಹೋಗುವವರು ಸೀಟ್ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದರು. ಕೆಲವು ಮಾರ್ಗಗಳಲ್ಲಿ ಬಸ್‌ಗಳಿಗೆ ಕಾಲಿಡಲು ಕೂಡ ಜಾಗವಿಲ್ಲದಷ್ಟು ಜನರು ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿತ್ತು.
ಪ್ರಸ್ತುತ ಬಿಎಂಟಿಸಿಯಲ್ಲಿರುವ 6800ಕ್ಕೂ ಹೆಚ್ಚು ಬಸ್‌ಗಳು ನಗರದ ಪ್ರಯಾಣಿಕರ ಸಂಖ್ಯೆಗೆ ಸಾಲುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಹೀಗಾಗಿ ಕೇಂದ್ರ ಸರ್ಕಾರದ PM-E-DRIVE ಯೋಜನೆಯಡಿ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ 1750 ಬಸ್‌ಗಳು ಬಿಎಂಟಿಸಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್‌ಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈ ಬಸ್‌ಗಳ ಖರೀದಿ ಪ್ರಕ್ರಿಯೆಯನ್ನು ಸಿಇಎಸ್ಎಲ್ ಸಂಸ್ಥೆ ಟೆಂಡರ್ ಮೂಲಕ ನಡೆಸಿದ್ದು, ಏಕಾ ಮೊಬಿಲಿಟಿ ಸಂಸ್ಥೆಗೆ 1750 ಬಸ್‌ಗಳ ಹಂಚಿಕೆ ಮಾಡಲು ಮುಂದಾಗಿದೆ. ಸಂಸ್ಥೆಗೆ ಲೆಟರ್ ಆಫ್ ಇನ್ಫರ್ಮೇಶನ್ ಆಫ್ ಕ್ವಾಂಟಿಟಿ ನೀಡಲಾಗಿದ್ದು, ಮುಂದಿನ ಹಂತದ ಪ್ರಕ್ರಿಯೆಗಳು ಆರಂಭವಾಗಿವೆ. ಒಪ್ಪಂದ ಆಧಾರದಲ್ಲಿ ಈ ಬಸ್‌ಗಳು ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ.
ಹೊಸ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿಯ ಹಳೆಯ ಬಸ್‌ಗಳಿಗೆ ಬದಲಿ ಆಗಲಿದ್ದು, ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಬಲವಾಗಲಿದೆ. ಸಾಮಾನ್ಯವಾಗಿ ಈ ಬಸ್‌ಗಳಲ್ಲಿ ಡ್ರೈವರ್ ಕಂಪನಿ ವತಿಯಿಂದ, ಕಂಡಕ್ಟರ್ ಬಿಎಂಟಿಸಿ ವತಿಯಿಂದ ನೇಮಕವಾಗುತ್ತಾರೆ. ಒಂದು ಕಿಲೋಮೀಟರ್‌ಗೆ ಸುಮಾರು 45 ರಿಂದ 50 ರೂಪಾಯಿ ವೆಚ್ಚದಲ್ಲಿ ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡಲಿದೆ. ಒಪ್ಪಂದದ ಪ್ರಕಾರ ಈ ಬಸ್‌ಗಳು 12 ವರ್ಷಗಳ ಕಾಲ ಸೇವೆ ನೀಡಲಿವೆ.
PM-E-DRIVE ಯೋಜನೆಯಡಿ ದೇಶಾದ್ಯಂತ ಒಟ್ಟು 14 ಸಾವಿರ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇದರಲ್ಲಿ ಬೆಂಗಳೂರಿಗೆ ಸುಮಾರು 4500 ಎಲೆಕ್ಟ್ರಿಕ್ ಬಸ್‌ಗಳನ್ನು ಘೋಷಿಸಲಾಗಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಣೆ ಕಾಣಲಿದೆ ಎನ್ನಲಾಗುತ್ತಿದೆ.
ಹೊಸ ಬಸ್‌ಗಳ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ಪ್ರಯಾಣಿಕರಾದ ವಸಂತ ಅವರು ಮಾತನಾಡಿ, “ಹೊಸ ಬಸ್‌ಗಳು ಬಂದರೆ ದಟ್ಟಣೆ ಕಡಿಮೆಯಾಗುತ್ತದೆ. ದಿನನಿತ್ಯ ಪ್ರಯಾಣ ಸುಲಭವಾಗಲಿದೆ” ಎಂದಿದ್ದಾರೆ. ಮಹಿಳಾ ಪ್ರಯಾಣಿಕರಾದ ಸೌಮ್ಯ ಅವರು ಕೂಡ “ಶಕ್ತಿ ಯೋಜನೆಯ ನಂತರ ಬಸ್‌ಗಳಲ್ಲಿ ತುಂಬಾ ಜನರಾಗಿದ್ದರು. ಈಗ ಹೊಸ ಬಸ್‌ಗಳು ಬಂದರೆ ನಮಗೆ ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.
ಹೊಸ ಬಸ್‌ಗಳ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ಪ್ರಯಾಣಿಕರಾದ ವಸಂತ ಅವರು ಮಾತನಾಡಿ, “ಹೊಸ ಬಸ್‌ಗಳು ಬಂದರೆ ದಟ್ಟಣೆ ಕಡಿಮೆಯಾಗುತ್ತದೆ. ದಿನನಿತ್ಯ ಪ್ರಯಾಣ ಸುಲಭವಾಗಲಿದೆ” ಎಂದಿದ್ದಾರೆ. ಮಹಿಳಾ ಪ್ರಯಾಣಿಕರಾದ ಸೌಮ್ಯ ಅವರು ಕೂಡ “ಶಕ್ತಿ ಯೋಜನೆಯ ನಂತರ ಬಸ್‌ಗಳಲ್ಲಿ ತುಂಬಾ ಜನರಾಗಿದ್ದರು. ಈಗ ಹೊಸ ಬಸ್‌ಗಳು ಬಂದರೆ ನಮಗೆ ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.